ರ‌್ಯಾಂಬೊ ಎಂ.ಎಸ್.ಶ್ರೀನಾಥ್ ಬರೆದು ನಿರ್ದೇಶಿಸಿದ ೨೦೧೨ ರ ಕನ್ನಡ ಭಾಷೆಯ ಹಾಸ್ಯ ಚಿತ್ರ. ಇದನ್ನು ಅಟ್ಲಾಂಟಾ ನಾಗೇಂದ್ರ ಮತ್ತು ಶರಣ್ ನಿರ್ಮಿಸಿದ್ದಾರೆ. ಶರಣ್ ಮತ್ತು ಮಾಧುರಿ ಇಟಗಿ ಪ್ರಮುಖ ನಟ ಮತ್ತು ನಟಿ ಆಗಿದ್ದಾರೆ. ಇದು ನಟ ಶರಣ್ ಅವರ ನೂರನೇ ಚಿತ್ರವಾಗಿದ್ದು, ಸೆಪ್ಟೆಂಬರ್ ೨೦೧೨ ರಲ್ಲಿ ಬಿಡುಗಡೆಯಾಯಿತು. ಅರ್ಜುನ್ ಜನ್ಯ ಈ ಚಿತ್ರದ ಸಂಗೀತ ನಿರ್ದೇಶಕರಾಗಿದ್ದಾರೆ. == ಕಥಾವಸ್ತು == 'ರ‌್ಯಾಂಬೊ' ಚಿತ್ರವು ಮುಖ್ಯವಾಗಿ ಕಿಟ್ಟಿ (ಶರಣ್) ಎಂಬ ಚೇಷ್ಟನ ಕುರಿತ ಚಿತ್ರ. ಅವನಿಗೆ ಮನೆಯಲ್ಲಿ ತಾಯಿ ಇದ್ದಾರೆ. ಕಿಟ್ಟಿಯ ಸೋದರ ಮಾವನಾದ ಪ್ರೇಮ್‌ಕುಮಾರ್ (ತಬಲಾ ನಾಣಿ) ಅವನೊಂದಿಗೆ ಇದ್ದಾರೆ. ಕಿಟ್ಟಿಯ ಕಾರ್ ಬ್ರೋಕರ್ ವ್ಯವಹಾರವು ಒಂದು ರೀತಿಯಲ್ಲಿ ವರಹಾವತಾರ ಇದ್ದಂತೆ . ಯಾವುದೇ ವಾಹನವು ಹಂದಿಗೆ ಡಿಕ್ಕಿ ಹೊಡೆಯಬಾರದು, ಇದು ಮುಂದಿನ ಜೀವನವನ್ನು ಒಡೆಯುತ್ತದೆ ಎಂಬುದು ಮೂಢನಂಬಿಕೆ. ಜೀವನದಲ್ಲಿ ಈ ಅಪಾಯವನ್ನು ಎದುರಿಸಲು ಯಾರೂ ಸಿದ್ಧರಿಲ್ಲ. ಹಂದಿಯನ್ನು ಬಳಸಿ ಕಿಟ್ಟಿ ತನ್ನ ವ್ಯವಹಾರಕ್ಕಾಗಿ ಕಾರುಗಳು ಸಿಗುವಂತೆ ಮಾಡುತ್ತಿದ್ದನು. ಒಂದು ಪ್ರಕರಣದಲ್ಲಿ ಉಮೇಶ್ ಒಡೆತನದ ಕಪ್ಪು ಬಣ್ಣದ ಕಾರಿಗಾಗಿ ಒಬ್ಬ ಸ್ವಾಮೀಜಿ ಬೇಡಿಕೆ ಇಟ್ಟಿದ್ದರು. ಈ ಒಪ್ಪಂದವು ಕಿಟ್ಟಿ ಮತ್ತು ಪ್ರೇಮ್‌ಕುಮಾರ್‌ಗೆ ಬರುತ್ತದೆ. ಇದರೊಂದಿಗೆ ಮತ್ತಷ್ಟು ಅಪಾಯವೂ ಇಬ್ಬರಿಗೆ ಬರುತ್ತದೆ. ಅವರು ಕಾರಿನ ಬಾನೆಟ್ ತೆರೆದಾಗ ಅಲ್ಲೊಂದು ಹೆಣ ಸಿಗುತ್ತದೆ. ಒಂದು ಭಯೋತ್ಪಾದಕ ಗುಂಪು ಈ ಹೆಣದ ಹಿಂದೆ ಬಿದ್ದಿದ್ದು, ಆ ಕಾರಿನಲ್ಲಿ ಮಾಜಿ ಸಚಿವ ಅಣ್ಣಪ್ಪ (ರಂಗಾಯಣ ರಘು) ಅವರ ₹ ೨೫ ಕೋಟಿ ಇರುವುದರಿಂದ ಅವರೂ ಕೂಡ ಕಾರನ್ನು ಹುಡುಕುತ್ತಿರುವರು. ಹೆಣವನ್ನು ನೋಡಿದ ಕಿಟ್ಟಿಯು ಕಾರಿನ ಬೇಡಿಕೆಯಿಟ್ಟ ಸ್ವಾಮೀಜಿಗೆ ಒಪ್ಪಿಸಲು ಬಯಸುತ್ತಾನೆ. ನಂತರ ಅದು ಮಂತ್ರಿಯೊಬ್ಬರಿಗೆ ಸೇರಿದ್ದು ಎಂದು ತಿಳಿದು, ಒಳಗೆ ಇರುವ ಹಣದ ಬಗ್ಗೆ ಅವರಿಗೆ ದುರಾಸೆ ಉಂಟಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಭಯೋತ್ಪಾದಕರು ಕಾರಿನ ಟ್ರಂಕ್‌ನಲ್ಲಿದ್ದ ಹೆಣದ ಹಿಂದೆ ಯಾಕೆ ಬಿದ್ದಿದ್ದಾರೆ ಎಂದು ತಿಳಿಯಲು ಕಿಟ್ಟಿ ಬಯಸುತ್ತಾನೆ. ಅವನು ದೇಹವನ್ನು ಸ್ಕ್ಯಾನ್ ಮಾಡಿ, ಅದರೊಳಗೆ ಪೆನ್ ಡ್ರೈವ್ ಕೂಡಿಟ್ಟಿದ್ದನ್ನು ಕಂಡುಕೊಳ್ಳುತ್ತಾನೆ. ಭಯೋತ್ಪಾದಕ ಗುಂಪು ದೊಡ್ಡ ದಾಳಿ ಎಸಗಲು ನಡೆಸಿದ ಯೋಜನೆ ಅದರಿಂದ ಗೊತ್ತಾಗುತ್ತದೆ. ಕಿಟ್ಟಿ ನೇರವಾಗಿ ಡಿಸಿ ವಿಜಯಲಕ್ಷ್ಮಿ (ಶ್ರುತಿ) ಬಳಿ ಬಂದು ಎಲ್ಲವನ್ನೂ ಸರ್ಕಾರಕ್ಕೆ ಒಪ್ಪಿಸುವ ಮೂಲಕ ಒಳ್ಳೆಯ ಪ್ರಜೆಯಾಗುತ್ತಾನೆ. == ನಿರ್ಮಾಣ == ರ‌್ಯಾಂಬೊ ಚಿತ್ರವು ಅಟ್ಲಾಂಟಾ ನಾಗೇಂದ್ರ ಮತ್ತು ಶರಣ್ ಅವರ ಜಂಟಿ ನಿರ್ಮಾಣವಾಗಿದೆ. ಚಿತ್ರವನ್ನು ಸೂಪರ್ ೩೫ ಎಂ.ಎಂ ಕ್ಯಾಮರಾ ಬಳಸಿ ೪೭ ಜಾಗಗಳಲ್ಲಿ ೫೫ ದಿನಗಳ ಕಾಲ ಚಿತ್ರಿಸಲಾಯಿತು. == ಪಾತ್ರವರ್ಗ == ಶರಣ್- ಕೃಷ್ಣ ಮೂರ್ತಿ ಅಲಿಯಾಸ್ ಕಿಟ್ಟಿಯಾಗಿ ಮಾಧುರಿ ಇಟಗಿ-ರೇವತಿ ತಬಲಾ ನಾಣಿ- ಪ್ರೇಮ್ ಕುಮಾರ್ ಅಲಿಯಾಸ್ ಬೆಲ್ಟ್ ಕುಮಾರ್ ಸಾಧು ಕೋಕಿಲಾ- ದುಮಿಲ್ ಕೃಷ್ಣ ರಂಗಾಯಣ ರಘು- ಮಂಗಳೂರು ಅಣ್ಣಪ್ಪ ಉಮಾಶ್ರೀ ಸಂಕೇತ್ ಕಾಶಿ ಶ್ರುತಿ ಎಂ.ಎಸ್.ಉಮೇಶ್ ಧರ್ಮ ರಿಷಿ ವೆಂಕಟೇಶ್ ಪ್ರಸಾದ್ ಚಂದನ್ ಆಚಾರ್ ಶಿವ ಮಂಜು ನವೀನ್ ಕೃಷ್ಣ (ಅತಿಥಿ ಪಾತ್ರ)- ವಾತಾಪಿ ಕುರಿಗಳು ಪ್ರತಾಪ್ ನವೀನ ಶಂಕರ್ == ಧ್ವನಿಪಥ == ಕನ್ನಡ ಚಿತ್ರೋದ್ಯಮದ ಪ್ರಮುಖರ ಉಪಸ್ಥಿತಿಯಲ್ಲಿ ರ‌್ಯಾಂಬೊ ಆಡಿಯೋ ಬಿಡುಗಡೆಯಾಯಿತು. ಕ್ರೇಜಿ ಸ್ಟಾರ್ ರವಿಚಂದ್ರನ್, ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಬಾಲಾಜಿ ವೀರಸ್ವಾಮಿ ಮುಖ್ಯ ಅತಿಥಿಗಳಾಗಿದ್ದರು. ಆಡಿಯೊ ಸಿಡಿ ಕವರ್ ಕಾರಿನ ಆಕಾರದಲ್ಲಿದೆ. ಚಿತ್ರದ ಎಲ್ಲಾ ಹಾಡುಗಳನ್ನು ಮಾಧ್ಯಮಗಳ ಮುಂದೆ ಪ್ರದರ್ಶಿಸಲಾಯಿತು. ಆಕರ್ಷಕ ರಾಗಗಳು ಮತ್ತು ಸೊಗಸಾದ ಪ್ರಸ್ತುತಿಗಾಗಿ ರ‌್ಯಾಂಬೊ ಆಡಿಯೊ ಬಹಳ ಮೆಚ್ಚುಗೆ ಪಡೆದಿದೆ. "ಮನೆ ತನಕ ಬಾರೆ" ಹಾಡು ೨೦೧೨ರ ಅತ್ಯುತ್ತಮ ಕನ್ನಡ ಹಾಡುಗಳಲ್ಲಿ ಒಂದು. ಸಿಡಿ ಮಾರಾಟ ಮತ್ತು ಡಿಜಿಟಲ್ ಡೌನ್‌ಲೋಡ್‌ಗಳಲ್ಲಿ ರ‌್ಯಾಂಬೊ ೨೦೧೨ ರ ಟಾಪ್ ಕನ್ನಡ ಆಲ್ಬಮ್‌ಗಳಲ್ಲಿ ಸ್ಥಾನ ಪಡೆದಿದೆ. == ಪ್ರತಿಕ್ರಿಯೆ == ರ‌್ಯಾಂಬೊ ಕರ್ನಾಟಕದಾದ್ಯಂತ ಒಳ್ಳೆಯ ಆರಂಭ ಪಡೆಯಿತು. ರ‌್ಯಾಂಬೊ ಕರ್ನಾಟಕದ ೪೦ ಕಡೆಯಲ್ಲಿ ೨೫ ದಿನ ಓಡಿದೆ. ರ‌್ಯಾಂಬೊ ಪ್ರಮುಖ ಕೇಂದ್ರಗಳಲ್ಲಿ ೫೦ ದಿನ ಓಡಿದೆ. ರಾಂಬೊ ೨೦೧೨ ರ ಅಗ್ರ ೫ ಹಿಟ್‌ಗಳಲ್ಲಿ ಒಂದಾಗಿದೆ. == ವಿಮರ್ಶೆಗಳು == ಟೈಮ್ಸ್ ಆಫ್ ಇಂಡಿಯ ಮೂರೂವರೆ ನಕ್ಷತ್ರಗಳನ್ನು ನೀಡಿತು. ಬೆಂಗಳೂರು ಮಿರರ್ ೩ ನಕ್ಷತ್ರಗಳ ರೇಟಿಂಗ್ ಕೊಟ್ಟಿದೆ. ಇಂಡಿಯಾಗ್ಲಿಟ್ಜ್ ರ‌್ಯಾಂಬೊ ಒಳ್ಳೆಯ ಚಿತ್ರ ಎಂದಿದೆ. ಸಿಎನ್ಎನ್ ಐಬಿಎನ್ ಲೈವ್ ರ‌್ಯಾಂಬೊವನ್ನು ಒಳ್ಳೆಯ ಮನರಂಜನೆ ಎಂದು ಹೇಳಿದೆ. ಎನ್‌ಡಿಟಿವಿಯು ಚಲನಚಿತ್ರ ಪ್ರಾರಂಭದಿಂದ ಮುಗಿಸುವವರೆಗೆ ಉತ್ತಮ ಮನರಂಜನೆ ಕೊಡುತ್ತದೆ ಎಂದು ಹೇಳಿದೆ. ಡಿಎನ್‌ಎ ಇಂಡಿಯಾ ೭೦% ರೇಟಿಂಗ್ ನೀಡಿದೆ. ಚಿತ್ರತಾರ ಇದನ್ನು ನೋಡಲು ಯೋಗ್ಯ ಎಂದಿದೆ. ಚಿತ್ರಲೋಕವು ತರ್ಕ ಮರೆತು ಜಾದೂ ಆನಂದಿಸಿ ಎಂದಿದೆ. ಸೂಪರ್ ಗುಡ್ ಮೂವೀಸ್ ಇದನ್ನು ಒಳ್ಳೆಯ ಮನರಂಜನೆ ನೀಡುವ ಚಿತ್ರ ಎಂದು, ಮೂರೂವರೆ ನಕ್ಷತ್ರಗಳನ್ನು ನೀಡಿದೆ. ಒನ್ ಇಂಡಿಯಾ ಎಂಟರ್‌ಟೇನ್ಮೆಂಟ್ ರ‌್ಯಾಂಬೊವನ್ನು ಮನೋರಂಜಕ ಎಂದು ಹೇಳಿದೆ. "ಸಿನಿ ಲೋಕ" ವು ರ‌್ಯಾಂಬೊ ಒಂದು ತಪ್ಪಿಸಿಕೊಳ್ಳಲಾಗದ ಕಾಮಿಡಿ ಚಿತ್ರ ಎಂದು ಹೇಳಿದೆ. ಇಂಡಿಯನ್ ಎಕ್ಸ್‌ಪ್ರೆಸ್ ರ‌್ಯಾಂಬೊವನ್ನು ಒಳ್ಳೆಯ ಕಾಮಿಡಿ ಎಂದು ರೇಟ್ ಮಾಡಿದೆ. "ಭರತ್‌ಸ್ಟೂಡೆಂಟ್" ಇದನ್ನು ವಿಭಿನ್ನ ಪರಿಕಲ್ಪನೆ, ಮನರಂಜನೆಯ ನಿರೂಪಣೆಯಾಗಿದ್ದು, ಚಿತ್ರವನ್ನು ನೋಡಿ ಎಂದು ಹೇಳಿದೆ. == ಸಾಗರೋತ್ತರ ಬಿಡುಗಡೆ == ರ‌್ಯಾಂಬೊವನ್ನು ಅಮೆರಿಕಾದ ಪ್ರಮುಖ ನಗರಗಳಲ್ಲಿ ಬಿಡುಗಡೆ ಮಾಡಲಾಯಿತು. ರ‌್ಯಾಂಬೊವನ್ನು ಆಸ್ಟ್ರೇಲಿಯಾದಲ್ಲಿ ಪ್ರದರ್ಶಿಸಲಾಯಿತು. == ಪ್ರಶಸ್ತಿಗಳು == ರ‌್ಯಾಂಬೊ ಉದಯ ಚಲನಚಿತ್ರ ಪ್ರಶಸ್ತಿ ೨೦೧೩ ರಲ್ಲಿ ೪ ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿತು. ರ‌್ಯಾಂಬೊ ೨೦೧೨ ರ ಬೆಂಗಳೂರು ಟೈಮ್ಸ್ ಚಲನಚಿತ್ರ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ. ರ‌್ಯಾಂಬೊ ಚಿತ್ರವು ೬೦ ನೇ ಐಡಿಯಾ ಫಿಲ್ಮ್‌ಫೇರ್ ಪ್ರಶಸ್ತಿ ೨೦೧೩ ಕ್ಕೆ ನಾಮನಿರ್ದೇಶನ ಮಾಡಲಾಯಿತು. ರ‌್ಯಾಂಬೊ ಚಿತ್ರವನ್ನು ಸಂತೋಷಮ್ ಫಿಲ್ಮ್ ಅವಾರ್ಡ್ಸ್ ೨೦೧೩ಗೆ ನಾಮನಿರ್ದೇಶನ ಮಾಡಲಾಯಿತು. ರ‌್ಯಾಂಬೊ ಚಿತ್ರವು ಈ ಟಿವಿ ಕನ್ನಡ ಸಂಗೀತ ಸಮ್ಮಾನ್ ೨೦೧೩ ಪ್ರಶಸ್ತಿಗಳಿಗೆ ೪ ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿತು. == ಉಲ್ಲೇಖಗಳು ==